ಕೋರೋನ ಜಗತ್ತಿನಾದ್ಯಂತ ಅಟ್ಟಹಾಸದಿಂದ ಮೆರೆಯುತ್ತಿದೆ. ಯಾವುದೇ ಧರ್ಮ ಜಾತಿ ಬೇಧ ಇಲ್ಲದೆ ಕಂಡ ಕಂಡವರನ್ನು ದಿನದಿಂದ ದಿನಕ್ಕೆ ಬಲಿ ಪಡೆದುಕೊಳ್ಳುತ್ತಲೇ ಇದೆ. ಕೊರೋನ ನಿಯಂತ್ರಣಕ್ಕೆ ತರೋಕೆ ಸಂಪೂರ್ಣವಾಗಿ ನಿರ್ಣಾಮ ಮಾಡೋಕೆ ಅಂತ ಮಾನ್ಯ ಪ್ರಧಾನ ಮಂತ್ರಿ ಅವರು ಲಾಕ್ ಡೌನ್ ಜಾರಿಗೆ ತಂದು ಹಲವಾರು ವೈದ್ಯರು ಪೊಲೀಸ್ ಅಧಿಕಾರಿಗಳು ಇದರ ವಿರುದ್ಧವಾಗಿ ಹೋರಾಟ ಮಾಡ್ತಾ ಇದ್ದಾರೆ. ಕರೋನ ಬಗ್ಗೆ ಹಲವಾರು ಜನರು ತಮ್ಮದೇ ಅಭಿಪ್ರಾಯ ವ್ಯಕ್ತ ಪಡಿಸುತ್ತಾ ಇದ್ದಾರೆ. ಇಲ್ಲೊಬ್ಬ ಬಾಲ ಜ್ಯೋತಿಷಿ ಅಭಿಗ್ಯ ಆನಂದ್ ಈ ಕರೋನ ಕಾಯಿಲೆಯ ಬಗ್ಗೆ ಮೊದಲಿಂದಲೂ ಭವಿಷ್ಯ ಹೇಳುತ್ತಲೇ ಬಂದಿದ್ದು ಈಗ ಕರೋನ ದಿಂದ ಮುಕ್ತಿ ಯಾವಾಗ ಈ ಸೋಂಕು ಯಾವಾಗ ಅಂತ್ಯ ಆಗುತ್ತದೆ ಎಂಬುದನ್ನು ತಿಳಿಸಿದ್ದಾರೆ.
ಪ್ರಪಂಚವೇ ಈ ಸೋಂಕಿನಿಂದ ನರಳುತ್ತಿದೆ. ಎಲ್ಲರೂ ಭಯಭೀತರಾಗಿದ್ದಾರೆ. ಈ ಕುರಿತು ಬಾಲ ಜ್ಯೋತಿಷಿ ಆಭಿಗ್ಯ ಆನಂದ್ ನಾನು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಇದರ ಬಗ್ಗೆ ಭವಿಷ್ಯ ಹೇಳಿದಾಗ ಯಾರು ಕಿವಿಗೊಡಲಿಲ್ಲ ನಂಬಲಿಲ್ಲ. ಮಾಲಿನ್ಯದಿಂದ ಕೂಡಿದ ನಗರಗಳಲ್ಲಿ ವಾಸ ಮಾಡುತ್ತಾ ಇದ್ದರು. ಬೆಳಿಗ್ಗೆ ಬೇಗ ಎದ್ದು ಸೂರ್ಯನ ಬಿಸಿಲಿಗೆ ಮೈ ಒಡ್ಡಿ ನಿಲ್ಲಿ ಎಂದಿದ್ದೆ ಅದನ್ನೂ ಸಹ ಮಾಡಲಿಲ್ಲ. ಪರಿಸರ ನಮಗೆ ನೀಡಿದ ಉಡುಗೊರೆಯನ್ನು ನಾವು ಅತಿಯಾಗಿ ಹಾಲು ಮಾಡುತ್ತಾ ಇದ್ದೇವೆ ಎಂದೂ ಹೇಳಿದ್ದರು. ಇನ್ನೂ ಕರೋನ ವೈರಸ್ ನ ಅಂತ್ಯ ಮೇ ೨೯ ಕ್ಕೆ ಎಂದು ನಾನು ಹೇಳಿದ್ದೇನೆ ಎಂಬುದಾಗಿ ಎಲ್ಲರೂ ಸುದ್ಧಿ ಹಬ್ಬಿಸುತ್ತ ಇದ್ದಾರೆ. ಆದರೆ ಕರೋನ ಮೇ ೨೯ಕ್ಕೇ ಸಂಪೂರ್ಣವಾಗಿ ಅಂತ್ಯ ಆಗಲ್ಲ ಬದಲಿಗೆ ಅಂದಿನಿಂದ ವೈರಸ್ ಹರಡುವ ವೇಗ ಕಡಿಮೆ ಆಗುತ್ತದೆ ಅಷ್ಟೆ.
ಮೇ ೨೯ ರ ನಂತರ ವೈರಸ್ ಹರಡುವುದು ಕಡಿಮೆ ಆಗುತ್ತದೆ ಆದರೆ ಅದು ಕೇವಲ ಎರಡು ದಿನಗಳಿಗೆ ಮಾತ್ರ. ಸಂಪೂರ್ಣವಾಗಿ ಕಡಿಮೆ ಆಗಲು ಜೂನ್ ತಿಂಗಳು ಕಡಿಮೆ ಆಗಬೇಕು ಜುಲೈ ಮೊದಲನೇ ವಾರದಿಂದ ಇಳಿಮುಖ ಕಾಣಬಹುದು. ಯಾಕೆ ಹೀಗೆ ಅಂದರೆ, ಮೇ ೨೯ರಂದು ಮರ್ಕ್ಯುರಿ ಕಾಳ ಸರ್ಪ ಯೋಗದಿಂದ ಹೊರ ಬಂದು ಮತ್ತೆ ಹಿಂದಿರುಗುತ್ತದೆ. ಆದ್ದರಿಂದ ಆರ್ಥಿಕತೆಯಲ್ಲಿ ಬಹಳಷ್ಟು ತೊಂದರೆ ಉಂಟಾಗುತ್ತದೆ. ಜುಲೈ ತಿಂಗಳಲ್ಲಿ ಒಂದು ಹೊಸ ಜೀವನೋಪಾದಿ ಶುರು ಆಗುತ್ತದೆ. ಡಿಸೆಂಬರ್ ಅರ್ಧದವರೆಗು ಶಾಂತಿಯಿಂದ ಸಾಗುತ್ತದೆ. ಈ ವೈರಾಣುವಿನ ಹೊರೆ ಇರಲ್ಲ. ಸಂಪೂರ್ಣ ಅಂತ್ಯ ಕಾಣದೇ ಹೋದರು ಸಹ ಈಗಿನ ಪರಿಸ್ಥಿತಿಗೆ ಹೋಲಿಸಿದರೆ ಸ್ವಲ್ಪ ಪ್ರಮಾಣದಲ್ಲಿ ಸುಧಾರಣೆ ಕಂಡಿರುತ್ತದೆ. ಇಂದಿನಿಂದ ಮೇ ನಾಲ್ಕರವರೆಗೂ ಈ ವೈರಸ್ ವಿರುದ್ಧ ಹೋರಾಟ ಇರುತ್ತದೆ. ಜನರು ಇದಕ್ಕೆ ತಯಾರಾಗಿ ಇರಬೇಕು ಹಾಗೂ ತಮ್ಮ ಆಹಾರವನ್ನು ಬೇಳೆದುಕೊಳ್ಳುವಷ್ಟು ಸಾಮರ್ಥ್ಯ ಹೊಂದಿರಬೇಕು. ಎಂದು ಬಾಲ ಜ್ಯೋತಿಷಿ ಅಭಿಗ್ಯ ಆನಂದ್ ತಿಳಿಸಿದ್ದಾರೆ.
ಅಷ್ಟೆ ಅಲ್ಲದೆ ದೇಶದಲ್ಲಿ ವ್ಯವಸಾಯದ ಮೇಲೂ ಸಹ ಲಾಕ್ ಡೌನ್ ಹೇರಲಾಗಿದೆ ಅದನ್ನು ತೆಗೆಯಬೇಕು ಊಟ ಇಲ್ಲದೆಯೇ ಜನರು ಹಸಿವಿನಿಂದ ಸಾಯುವ ಹಾಗೆ ಆಗಬಾರದು. ನಾವು ಮೈಕ್ರೋ ವೇವ್ ಮಾಡಿದ ಊಟವನ್ನ ತಿನ್ನಲು ಸಾಧ್ಯವಿಲ್ಲ. ಸಾವಯವ ಕೃಷಿಗೆ ಉತ್ತೇಜನ ನೀಡಿ ಅದರಿಂದ ಬೆಳೆದ ಆಹಾರವನ್ನು ನಾವು ಸೇವಿಸಬೇಕು ಎಂದು ಸಲಹೆ ನೀಡಿದ್ದಾರೆ.