ಹಣದಬಗ್ಗೆ ಚಾಣಕ್ಯರು ಹೇಳಿರುವ ಚಾಲಾಕಿ ವಿಚಾರ

ಚಾಣಕ್ಯರು ತಮ್ಮ ಜೀವಿತ ಅವಧಿಯಲ್ಲಿ ಎಲ್ಲ ವಿಚಾರಗಳ ಬಗ್ಗೆ ವಿದ್ವತ್ತನ್ನು ಹಂಚಿಕೊಂಡಿದ್ದಾರೆ ತಮ್ಮ ವಿದ್ಯೆಯನ್ನ ಮುಂದಿನ ಪೀಳಿಗೆಗೆ ಹಂಚಿಹೋಗಿದ್ದರೆ ಅದರಲ್ಲೂ ಅರ್ಥಶಾಸ್ತ್ರದಲ್ಲಿ ಚಾಣಕ್ಯರನ್ನು ಇವತ್ತಿಗೂ ಯಾರು ಮೀರಿಸೋಕೆ ಆಗಲ್ಲ ಚಾಣಕ್ಯ ಅವರ ಪ್ರಸ್ತಾವನೆಗೆ ಇಂದು ಜೀವಂತ ಎಂದು ಹೇಳಲಾಗುತ್ತದೆ

ಅವರ ಚಿಂತನೆಗಳು ಇಂದಿಗೂ ಅದ್ಭುತ ಅಮೋಘ ಇಂತಹ ಚಾಣಕ್ಯರು ಹಣದ ಬಗ್ಗೆ ಸಾಕಷ್ಟು ಸಂಗತಿಗಳನ್ನ ಹೇಳಿದ್ದಾರೆ ಹಣವನ್ನು ಗಳಿಸುವುದು ಹೇಗೆ ಹಾಗೆ ಗಳಿಸಿದ ಹಣವನ್ನು ಬಳಸೋದು ಹೇಗೆ ಅನ್ನೋ ವಿಚಾರಗಳನ್ನ ಹೇಳಿದ್ದಾರೆ ದುಡ್ಡಿನಬಗ್ಗೆ ಅದರಲ್ಲೂ ಚಾಣಕ್ಯರು ಹೇಳಿರುವ ವಿಚಾರ ಅಂದರೆ ಅದು ಸಾಮಾನ್ಯವಲ್ಲ

ಶ್ರೀಮಂತರಿಗೆ ಆಪತ್ಕಾಲದ ಅರಿವೇ ಆಗದು ಹೌದು ಶ್ರೀಮಂತರಿಗೆ ಆಪತ್ಕಾಲದ ಅರಿವು ಆಗುವುದಿಲ್ಲ ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಸದ್ಯದ ಕರೋನ ಸಮಯ ಈ ಕರೋನ ಲಾಕ್ ಡೌನ್ ಸಂಕಷ್ಟದ ಸಮಯದಲ್ಲಿ ಬಡವರಿಗೆ ಸಮಸ್ಯೆ ಆಯಿತೇ ಹೊರೆತು ಯಾವ ಶ್ರೀಮಂತರಿಗೂ ಸಮಸ್ಯೆ ಆಗಲಿಲ್ಲ ಅವರಿಗೆ ಬರ ಬಂದರು ರೋಗ ಬಂದರು ಯಾವುದೇ ಸಮಸ್ಯೆ ಆಗಲ್ಲ ಏಕೆಂದರೆ ಅವರ ಬಳಿ ಹಣ ಇರುತ್ತೆ ಹಣ ಒಂದಿದ್ರೆ ಇಂತಹ ಆಪತ್ಕಾಲವನ್ನು ಎದುರಿಸಿಬಿಡಬಹುದು ಅಂತ ಆ ಕಾಲದಲ್ಲಿಯೇ ಆಚಾರ್ಯ ಚಾಣಕ್ಯರು ಹೇಳಿದ್ದಾರೆ

ಹಣ ಸಂಗ್ರಹದಲ್ಲಿ ಮಡದಿಯ ಸಹಕಾರ ಇರಬೇಕು ಹೌದು ಕಷ್ಟಕಾಲಕ್ಕೆ ಬರಲೆಂದು ಪುರುಷ ಹಣವನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು ಹಣಕ್ಕಿಂತ ಮುಖ್ಯವಾಗಿ ಮಡದಿಯ ರಕ್ಷಣೆಕಡೆಗೂ ಜವಾಬ್ದಾರಿ ವಹಿಸಿ ಆಕೆಯ ಮೂಲಕ ತಾನು ತನ್ನ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು ಅಂತ ಚಾಣಾಕ್ಷ ಅವರು ಹೇಳಿದ್ದಾರೆ ಇದರ ಅರ್ತ ಇಷ್ಟೇ ಪುರುಷ ಹಣವನ್ನು ಸಂಪಾದನೆ ಮಾಡಿ ಕಷ್ಟಕಾಲಕ್ಕೆ ಅದನ್ನು ಉಳಿಸಿಕೊಳ್ಳಬೇಕು

ಅದರಲ್ಲಿ ಮಡದಿಯ ಸಹಕಾರಕೂಡ ತುಂಬಾನೇ ಮುಖ್ಯ ಎಂದು ಹೇಳುತ್ತಾರೆ ಪುರುಷ ಎಷ್ಟೇ ದುಡಿದರು ಮಹಿಳೆ ಅದನ್ನ ಖರ್ಚು ಮಾಡುವವಳಾಗಿದ್ರೆ ಅವರ ಮನೆಯಲ್ಲಿ ಲಕ್ಷ್ಮಿ ನಿಲ್ಲೋದಿಲ್ಲ ಮನೆಯಲ್ಲಿರುವಂತಹ ಮಡದಿಗೆ ಶಿಸ್ತು ಸಂಯಮ ಅನ್ನೋದು ಇಲ್ಲ ಅಂದ್ರೆ ಆಕೆ ಹಣವನ್ನು ಹಾಳುಮಾಡುತ್ತಾಳೆ ಪುರುಷ ಎಷ್ಟೇ ದುಡಿದರು ಅಂತವರ ಮನೆಯಲ್ಲಿ ಹಣ ನಿಲ್ಲೋದಿಲ್ಲ ಅವರ ಮನೆ ಉದ್ದಾರ ಆಗೋದಿಲ್ಲ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ

ಹಣವಿಲ್ಲದವನ ಬಾಳು ನಿಶ್ಪ್ರಯೋಜಕ ನೀರಸ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯರು ಹಣದ ಮಹಿಮೆ ಮಹತ್ತರವಾದದ್ದು ಹಣವೆಂದರೆ ಹೆಣವು ಸಹ ಬಾಯಿ ಬಿಡಬಹುದು ಹಣವಿಲ್ಲದವನಿಗೆ ಸಮಾಜದಲ್ಲಿ ಯಾವುದೇ ಸ್ಥಾನವು ಸಿಗುವುದಿಲ್ಲ ನಿಜಕ್ಕೂ ಹಣ ಇಲ್ಲದವನು ಹೆಣದ ಸಮಾನ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯರು

ಯಾವುದೇ ವ್ಯಕ್ತಿ ತನ್ನ ಸಮಯವನ್ನ ವಿದ್ಯೆ ಹಾಗು ಜ್ಞಾನ ಸಂಪಾದನೆಗೆ ಬಳಸಬೇಕು ಇನ್ನು ಉಳಿದ ಸಮಯವನ್ನು ಖಂಡಿತ ಹಣದ ಸಂಪಾದನೆಗೆ ಇಡಬೇಕು ಹಣವಿಲ್ಲದವನಿಗೆ ಯಾರು ಮರಿಯಾದೆ ಕೊಡುವುದಿಲ್ಲ ಎಂದು ಹೇಳುತ್ತಾರೆ ಚಾಣಕ್ಯ ಇದು ಅಂದಿಗೂ ಪ್ರಸ್ತುತ ಇಂದಿಗೂ ಪ್ರಸ್ತುತ ಅನ್ನೋದ್ರಲ್ಲಿ ಎರಡು ಮಾತಿಲ್ಲ

ಹಣವಿಲ್ಲದವನ ಬಾಳು ಹಣ್ಣಿಲ್ಲದ ಒಂಟಿ ಮರವಿದ್ದಂತೆ ಒಂದು ಮರ ಫಲ ಬಿಡುತ್ತೆ ಅಂದರೆ ಅಲ್ಲಿ ಪ್ರಾಣಿ ಪಕ್ಷಿ ಬರುತ್ತವೆ ಅದೇ ರೀತಿ ಮನುಶ್ಯನ ಬಳಿ ಹಣ ಇದ್ದರಷ್ಟೇ ಅವನ ಸುತ್ತಲೂ ಬಂಧು ಬಾಂಧವರು ಸ್ನೇಹಿತರು ಸುತ್ತಲಿರುತ್ತಾರೆ ಎಂದು ಹೇಳುತ್ತಾರೆ ಚಾಣಕ್ಯರು

Leave a Comment