ಕುಂಭ ರಾಶಿಯವರಿಗೆ ಈ ಸೆಪ್ಟೆಂಬರ್ ತಿಂಗಳಲ್ಲಿ ಶನಿಯಿಂದ ಏನು ತೊಂದರೆ ಇಲ್ಲ, ಆದ್ರೆ ಅರೋಗ್ಯ ವಿಚಾರದಲ್ಲಿ ಎಚ್ಚರವಹಿಸಬೇಕು ಯಾಕೆಂದರೆ..

Aquarius Horoscope: ಸೆಪ್ಟೆಂಬರ್ ತಿಂಗಳಲ್ಲಿ ಕುಂಭ ರಾಶಿಯ ಭವಿಷ್ಯ ಹೇಗಿರುತ್ತದೆ ಎಂದು ಇಂದು ತಿಳಿಯೋಣ.. ಕುಂಭ ರಾಶಿಯ ಅಧಿಪತಿ ಆಗಿರುವ್ ಶನಿದೇವ ಈಗ ತನ್ನದೇ ಆದ ಕುಂಭ ರಾಶಿಯಲ್ಲಿದ್ದಾನೆ. ಇದು ಒಂದು ರೀತಿ ಒಳ್ಳೆಯದಾದರೆ, ಇನ್ನೊಂದು ರೀತಿಯಲ್ಲಿ ಅಶುಭ ಎಂದು ಹೇಳಬಹುದು. ಏಕೆಂದರೆ ಶನಿದೇವ ಕುಂಭ ರಾಶಿಯಲ್ಲಿ ಇರುವುದರಿಂದ ಆ ರಾಶಿಯವರ ಆರೋಗ್ಯ, ನೆಮ್ಮದಿ ಎಲ್ಲಾ ವಿಚಾರದಲ್ಲೂ ಕಾಪಾಡುತ್ತಾನೆ. ಆದರೆ ಇನ್ನೊಂದು ಕಡೆ ಈಗ ಶನಿದೇವರ ಮಧ್ಯಮ ಸಾಡೇಸಾತಿ ನಡೆಯುತ್ತಿದ್ದು, ಇದರಿಂದ ಶನಿದೇವರು ನಿಮಗೆ ಕಾಡುತ್ತಿದ್ದಾನೆ.

ಮಧ್ಯಮ ಸಾಡೇಸಾತಿ ನಡೆಯುವಾಗ ಶನಿದೇವರಿಂದ ಯಾವುದು ಕೂಡ ಪಾಸಿಟಿವ್ ಪರಿಣಾಮ ಇರುವುದಿಲ್ಲ. ಶನಿದೇವರಿಂದ ನೆಗಟಿವ್ ಆಗುತ್ತದೆ ಎಂದು ಅರ್ಥವಲ್ಲ. ನಿಮ್ಮ ಜಾತಕ ನೋಡಿದರೆ ಜನ್ಮಸ್ಥಾನದಲ್ಲಿ ಶನಿದೇವರ ಸ್ಥಾನವನ್ನು ನೋಡಿ, ಒಂದು ವೇಳೆ ಶನಿದೇವರು ಶತ್ರುವಿನ ಮನೆಯಲ್ಲಿದ್ದರೆ ಆಗ ನಿಮಗೆ ತೊಂದರೆ ಆಗಬಹುದು. ಒಂದು ಸಾರಿ ನೀವು ನಿಮ್ಮ ಜಾತಕವನ್ನು ಜ್ಯೋತಿಷಿಗಳ ಹತ್ತಿರ ತೆಗೆದುಕೊಂಡು ಹೋಗಿ, ಹೇಗಿದೆ ಎಂದು ಎಲ್ಲಾ ವಿಚಾರಗಳನ್ನು ತಿಳಿದು ಅಗತ್ಯವಿರುವ ಪರಿಹಾರ ಕೇಳಿ, ಅದನ್ನು ಮಾಡಿದರೆ ಸಾಡೆಸರಿಯ ತೊಂದರೆ ಆಗುವುದಿಲ್ಲ. ಇದರಿಂದ ನಿಮಗೆ ಯಾವುದೇ ದೋಷ ಆಗುವುದಿಲ್ಲ.

12ನೇ ಮನೆಯಲ್ಲಿ ಶನಿದೇವ ಇರುವುದರಿಂದ ಕುಂಭ ರಾಶಿಯವರಿಗೆ ಹೆಚ್ಚಿನ ಖರ್ಚು ಆಗುವುದಿಲ್ಲ. ಹಾಗೆಯೇ ಈ ವೇಳೆಯಲ್ಲಿ ನೀವು ನಿಮ್ಮ ಕೆಲಸಗಳನ್ನು ನೋಡಿಕೊಂಡು ಇರುವುದು ಒಳ್ಳೆಯದು. ಯಾಕೆಂದರೆ ಬೇರೆಯವರ ತಪ್ಪುಗಳಿಂದ ನಿಮಗೆ ಅವಮಾನ ಆಗಬಹುದು. ಇನ್ಯಾರೋ ಮಾಡಿದ ತಪ್ಪಿನಿಂದ ನೀವು ತೊಂದರೆ ಅನುಭವಿಸುವ ಹಾಗೆ ಆಗಬಹುದು. ಹಾಗಾಗಿ ಬೇರೆಯವರ ವಿಷಯಕ್ಕೆ ಹೋಗದೆ ನಿಮ್ಮ ಕೆಲಸದ ಬಗ್ಗೆ ಕಾಳಜಿ ವಹಿಸಿ. ಹಾಗೆಯೇ ನಿಮ್ಮ ಹತ್ತಿರ ಕಾರ್ ಅಥವಾ ವಾಹನ ಇದ್ದರೆ ಅದನ್ನು ಓಡಿಸಿಕೊಂಡು ಹೋಗಿ, ಅಥವಾ ಬಸ್ ಟ್ರೇನ್ ನಲ್ಲಿ ಪ್ರಯಾಣ ಮಾಡಿ.. ಆದರೆ ಬೇರೆಯವರ ಕಾರ್ ತೆಗೆದುಕೊಂಡು ನೀವು ಹೋದರೆ ಅದರಿಂದ ನೀವೇ ತೊಂದರೆ ಅನುಭವಿಸಬಹುದು.

ಕುಂಭ ರಾಶಿಯ 4ನೇ ಮನೆಯಲ್ಲಿ ಗುರು ನೆಲೆಸಿದ್ದಾನೆ ಹಾಗಾಗಿ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ರಾಹು ಇದ್ದರು ಕೂಡ ನೀವು ಜಾಸ್ತಿ ತಲೆಕೆಡಿಸಿಕೊಳ್ಳುವ ಹಾಗಿಲ್ಲ. 8ನೇ ಮನೆಯಲ್ಲಿ ಕುಜ ಇದ್ದರೆ ಕುಜ ದೋಷ ಆಗುರ್ತದೆ ಎಂದು ಹೇಳುತ್ತಾರೆ, ಇದು ಕುಂಭ ರಾಶಿಯವರಿಗೆ ಅಪ್ಲೈ ಆಗುತ್ತದೆ. ಈ ವೇಳೆ ಕೋಪ ಬರುವ ಸಾಧ್ಯತೆ ಇರುವುದರಿಂದ ನೀವು ಅದೆಲ್ಲವನ್ನು ಕಂಟ್ರೋಲ್ ಮಾಡಬೇಕಾಗುತ್ತದೆ. ಸೂರ್ಯ ಈಗ ಸ್ವಸ್ಥಾನದಲ್ಲಿದ್ದು 17ನೇ ತಾರೀಕಿನ ನಂತರ ಮಿತ್ರ ಕ್ಷೇತ್ರಕ್ಕೆ ಹೋಗುತ್ತಾನೆ ಬುಧ ಕೂಡ ಮಿತ್ರ ಕ್ಷೇತ್ರಕ್ಕೆ ಹೋಗುತ್ತಾನೆ. ಪರಿವರ್ತನಾ ಯೋಗ ಕೂಡ ಕುಂಭ ರಾಶಿಯಲ್ಲಿ ಇರುತ್ತದೆ.

ಕುಂಭ ರಾಶಿಯ 6ನೇ ಮನೆಯಲ್ಲಿ ಶುಕ್ರನಿದ್ದಾಗ, ಇದು ಅಶುಭ ಸಮಯ ಆಗಿರುತ್ತದೆ. ಇದರಿಂದ ಕುಂಭ ರಾಶಿಯವರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು, ಸಕ್ಕರೆ ಖಾಯಿಲೆ ಅಥವಾ ಇನ್ನಿತರ ಆರೋಗ್ಯ ಸಮಸ್ಯೆ ಉಂಟಾಗಬಹುದು. ಈ ವೇಳೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಈ ಸಮಯದಲ್ಲಿ ನಿಮಗೆ ಜನನಾಂಗದ ತೊಂದರೆ ಆಗಬಹುದು, ಯೂರಿನರಿ ಇನ್ಫೆಕ್ಷನ್ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಎಕ್ಸೆಸ್ ಆಫ್ ಹೀಟ್ ಆಗಿ ಅದರಿಂದಲು ತೊಂದರೆ ಆಗಬಹುದು. ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗು ತೊಂದರೆ ಆಗಬಹುದು, ಕಣ್ಣಿನ ಸಮಸ್ಯೆ ಅಥವಾ ಇನ್ನಿತರ ಸಮಸ್ಯೆ ಕಂಡುಬರಬಹುದು.

ಸಂಬಂಧಿಕರಿಂದ ಸಮಸ್ಯೆ ಉಂಟಾಗಬಹುದು. 6ನೇ ಮನೆಯಲ್ಲಿ ಶುಕ್ರ ಇರುವುದರಿಂದ ತೊಂದರೆಯಾಗಿ ಸಾಲ ಮಾಡುವಹಾಗೆ ಆಗಬಹುದು, ಅನಾರೋಗ್ಯದಿಂದ ಆಸ್ಪತ್ರೆಗೆ ಸೇರುವ ಹಾಗೆ ಆಗಬಹುದು, ಹಾಗಾಗಿ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದ್ದರೆ ಆಸ್ಪತ್ರೆಗೆ ಹೋಗಿಬನ್ನಿ. ಇನ್ಯಾವುದೇ ಗ್ರಹಗಳಿಂದ ತೊಂದರೆ ಆಗುವಂಥದ್ದು ಏನಿಲ್ಲ. ಶುಕ್ರನ ಸ್ಥಾನವನ್ನು ಬಲಪಡಿಸುವುದಕ್ಕೆ ನೀವು ಅಮ್ಮನವರ ಆರಾಧನೆ ಮಾಡಬೇಕಾಗುತ್ತದೆ. ಬೆಳಗ್ಗೆ ಎದ್ದ ನಂತರ ಅಮ್ಮನವರ ಸ್ತೋತ್ರ, ದುರ್ಗೆಯ ಅಷ್ಟೋತ್ರ, ಕಾಳಿಯ ಅಷ್ಟೋತ್ರ ಅಥವಾ ಸೌಂದರ್ಯಾಲಹರಿ, ಶಿವಾನಂದ ಲಹರಿ, ಲಲಿತಾ ಸಹಸ್ರನಾಮ, ಲಕ್ಷ್ಮಿ ಸಹಸ್ರನಾಮ ಯಾವುದನ್ನಾದರು ಸರಿ ಬೆಳಗ್ಗೆ ಎದ್ದು ಸ್ನಾನ ಮಾಡಿದ ನಂತರ ಜಪ ಮಾಡಿ. ಮಂತ್ರಗಳನ್ನು ಹೇಳಲು ಆಗದೆ ಹೋದರೆ ಅವುಗಳನ್ನು ಕೇಳಿ..

ಶುಕ್ರನ ಬೃಹಷಟ್ಕ ದೋಷ ತುಂಬಾ ಕೆಟ್ಟದ್ದು, ಆದರೆ ಈ ದೋಷ ಜಾಸ್ತಿ ದಿನ ಇರುವುದಿಲ್ಲ, ಈ ತಿಂಗಳು ನಿಮಗೆ ತೊಂದರೆ ಕೊಡಬಹುದು ಹಾಗಾಗಿ ಈ ವೇಳೆ ನೀವು ಆರೋಗ್ಯವನ್ನು ನೋಡಿಕೊಳ್ಳುವುದು ಒಳ್ಳೆಯದು. ‘ಓಂ ನಮೋ ಭಗವತೆ ವಾಸುದೇವಾಯ ಧನ್ವಂತರಯೇ..ಅಮೃತಾ ಕಲಶ ಹಸ್ತಾಯ ಸರ್ವಾಮಯ ವಿನಾಶಾಯ ತ್ರೈಲೋಕ್ಯನಾಥಾಯ ಶ್ರೀ ಮಹಾವಿಷ್ಣುವೇ ನಮಃ..” ಈ ಮಂತ್ರವನ್ನು ಜಪಿಸಿ..ಅಥವಾ ‘ಓಂ ಶ್ರೀ ಲಕ್ಷ್ಮಿ ಧನ್ವಂತರಯೇ ನಮಃ” ಈ ಮಂತ್ರ ಪಟನೆ ಮಾಡುವುದದಿಂದಲು ಒಳ್ಳೆಯದಾಗುತ್ತದೆ.

ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಇರುತ್ತದೆ, ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ. ಬಿಸಿನೆಸ್ ಮಾಡುವವರಿಗೆ ಇದು ಒಳ್ಳೆಯ ಸಮಯ ಪಾರ್ಟ್ನರ್ಶಿಪ್ ಬಿಸಿನೆಸ್ ಮಾಡುವವರಿಗೆ ಉತ್ತಮ ಲಾಭ ಸಿಗುತ್ತದೆ. ಸರ್ಕಾರಿ ಕೆಲಸದಲ್ಲಿ ಇರುವವರಿಗೂ ಇದು ಒಳ್ಳೆಯ ಸಮಯ ಆಗಿದೆ. ಆತುರ ಪಡಬೇಡಿ, ಪರ್ಸನಲ್ ವಿಚಾರಗಳ ಬಗ್ಗೆ ಗಮನ ಹರಿಸಿ, ಗುತ್ತಾಗಿಡಿ ಅಥವಾ ಅವುಗಳು ಬಹಿರಂಗ ಆಗಬಹುದು. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು, ಲವ್ ಲೈಫ್ ಕೂಡ ಹೇಳಿಕೊಳ್ಳುವಷ್ಟು ಚೆನ್ನಾಗಿ ಇರುವುದಿಲ್ಲ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಇರುತ್ತದೆ, ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರ ವಹಿಸಿ, ಹಾಗೆಯೇ ದೊಡ್ಡವರ ಸಲಹೆ ಪಡೆಯಿರಿ.

ಹೊಸ ಕೆಲಸಗಳನ್ನು ಮುಂದಕ್ಕೆ ಹಾಕಿ, ಖರ್ಚು ಜಾಸ್ತಿಯಾಗಬಹುದು. ವೃತ್ತಿ ಬದಲಾಯಿಸಲು ಇದು ಒಳ್ಳೆಯ ಸಮಯ ಅಲ್ಲ. ಮೋಸ ಹೋಗಬಹುದು ಹಾಗಾಗಿ ಜಾಗ್ರತೆ ವಹಿಸಿ. ಈ ವೇಳೆ ಮಾನಸಿಕ ಒತ್ತಡ ಜಾಸ್ತಿ ಇರುತ್ತದೆ, ಈ ವೇಳೆ ದೊಡ್ಡವರ ಅಭಿಪ್ರಾಯಕ್ಕೆ ಗೌರವ ಕೊಡುವುದು ಕೂಡ ಒಳ್ಳೆಯದು. ಈ ಸಮಯದಲ್ಲಿ ಧನಲಾಭ ಸಿಗುತ್ತದೆ ಹಾಗಾಗಿ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ಒಟ್ಟಾರೆಯಾಗಿ ನೋಡಿದರೆ ಉತ್ತಮ ಫಲ ಸಿಗುತ್ತದೆ.

Leave a Comment